Index   ವಚನ - 304    Search  
 
ಮರವೆ ಅರಿವಿನ ಮರೆಗೊಂಡು ತಲೆದೋರಿ ಅರಿವೆಂದೆನಿಸಿತ್ತು. ಅರಿವು ಮರವೆಯ ಮರೆಗೊಂಡು ತಲೆದೋ? ಮರಹೆಂದೆನಿಸಿತ್ತು. ಅರಿವು ಮರವೆಗಳಿಂದರಿತರಿವು ನಿಜವಪ್ಪುದೆ ? ಅದು ಹುಸಿ, ಅದೆಂತೆಂದಡೆ: ಪ್ರಾಣನಿಲಾಚೇಷ್ಟಮನೋಗಲಿತ್ವಂ ಮನೋಗಲಿತ್ವಾತ್ಕರಣಂ ಪ್ರಕೃತ್ಯಾ ಪ್ರಕೃತಿಯಿಂದಂ ಮರೆವರಿವು ತೋರ್ಕುಂ, ಮರೆವರಿವಿನಿಂ ಅನಿತ್ಯಂ. ಇದು ಕಾರಣ, ಅರಿವಿನ ಮರಹಿನ ಸಂಚಲದಿಂದರಿಹಿಸಿಕೊಂಡರಿವು ತಾನರಿವಲ್ಲ. ಅರಿಯದ ಮರೆಯದ ಮರವರಿವಿಂಗೆ ತೆರಹಿಲ್ಲದ ಬಚ್ಚಬರಿಯರಿವೆ ತಾನಾಗಿ. ಅರಿವೆಂಬ ಕುರುಹುಗೆಟ್ಟ ಪರಮಸ್ವಯಂಭು ನೀನೆ ಸೌರಾಷ್ಟ್ರ ಸೋಮೇಶ್ವರಾ.