Index   ವಚನ - 306    Search  
 
ಮಲಜಲವ ತೊಳೆಯಲುಂಟಲ್ಲದೆ, ನಿರ್ಮಲಜಲವ ತೊಳೆಯಲುಂಟೆ ? ತವರಾಜ ಹಗಿನಾಗಬಲ್ಲುದೆ ? ಮುತ್ತು ನೀರಾಗಬಲ್ಲುದೆ ? ಸಹಸ್ರನಯನ ಚತುರ್ಮುಖ ಅಧೋಕ್ಷಜ ರುದ್ರ ಪದವನತಿಗಳದು, ಭಾವ ಬ್ರಹ್ಮವಾದ ಆಕಾಯಚರಿತಂಗೆ ಪೂರ್ವಕ್ರಿಯಂಗಳುಂಟೆ ? ತನುಗುಣ ಮನಗುಣವಳಿದ ಲಿಂಗದೇಹಿ ನಿರ್ದೇಹಿ, ಅಪ್ರತಿಮ ನಿತ್ಯಜ್ಯೋತಿಯೊಳಗೆ ನಿಷ್ಪತ್ತಿಯಾದ, ಸೌರಾಷ್ಟ್ರ ಸೋಮೇಶ್ವರಲಿಂಗದೊಳಿಪ್ಪ ಅಪ್ರತಿಮ ಶರಣ.