ಮಹಿಯೆಂಬ ಕುಟ್ಟಿಮದ ದಿಗ್ಭಿತ್ತಿಯ
ಮೇಲೆ ಮುಚ್ಚಿದ ಅಂಡಕಟಾಹ ?
ಅಜನ ತತ್ತಿಯೊಳಗಣ ಪಶುಜೀವರೆಲ್ಲಾ ನೆರೆದು
ಕರ್ಮವೆಂಬುದೊಂದೆ ಬಟ್ಟಲೊಳಗೆ
ಮೋಹ ಮದ ರಾಗ ವಿಷಾದ ತಾಪ ಶಾಪ ವೈಚಿಂತ್ಯವೆಂಬ
ಏಳು ಮಲಂಗಳನೊಂದಾಗಿ ಕಲಸಿ ತಿನ್ನುತ್ತ
ಮೂರು ಮಲಂಗಳ ಬೇರೆ ಬೇರೆ ಅರಿಯುತ್ತ
ವಿಷಯವೆಂಬ ರಸವ ಕುಡಿದು
ಅಜ್ಞಾನವೆಂಬುದೊಂದೆ ಹಾಸಿಕೆಯಲ್ಲಿ ಮಲಗಿ
ಮೂರ್ಛೆ ತಿಳಿಯದಿಪ್ಪುದ ಕಂಡು ನಾಚಿತ್ತಯ್ಯಾ ಎನ್ನ ಮನ.
ನಿಮ್ಮ ಅಂತರಂಗವೆಂಬ ಚಿದಂಬರದಲ್ಲಿ ನಿಃಶೂನ್ಯವಾಗಿರಿಸೆನ್ನ
ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Mahiyemba kuṭṭimada digbhittiya
mēle muccida aṇḍakaṭāha?
Ajana tattiyoḷagaṇa paśujīvarellā neredu
karmavembudonde baṭṭaloḷage
mōha mada rāga viṣāda tāpa śāpa vaicintyavemba
ēḷu malaṅgaḷanondāgi kalasi tinnutta
mūru malaṅgaḷa bēre bēre ariyutta
viṣayavemba rasava kuḍidu
ajñānavembudonde hāsikeyalli malagi
mūrche tiḷiyadippuda kaṇḍu nācittayyā enna mana.
Nim'ma antaraṅgavemba cidambaradalli niḥśūn'yavāgirisenna
saurāṣṭra sōmēśvarā.