ವೇದಶಾಸ್ತ್ರಪುರಾಣಂಗಳ ಗತಿಯಲ್ಲಿ ನಡೆದು ತಪ್ಪಿತ್ತೆಂಬವನಲ್ಲ ಶರಣ.
ಲಿಂಗದ ಹೆಸರ ಹೇಳಿ ಫಲಪದವೆಂಟತೋರಿ ಮಾರುವನಲ್ಲ ಶರಣ.
ಅಚೇತನವ ಚೇತನಿಸುವ ಪೂರ್ವಕರ್ಮವಿಡಿದು
ಆಚರಿಸುವವನಲ್ಲ ಶರಣ.
ಆರು ಮೂರಕ್ಕೆ ತಂದು, ತ್ರಿವಿಧವನೊಂದು ಮಾಡಿ
ಬಿಚ್ಚಿ ಬೇರಿಲ್ಲದೆ ಬೆರಸಿ, ಒಂದಿಲ್ಲದಿರಬಲ್ಲನಾಗಿ
ತರ್ಕಂಗಳಿಗೆ ಅತಕ್ರ್ಯ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
Art
Manuscript
Music
Courtesy:
Transliteration
Vēdaśāstrapurāṇaṅgaḷa gatiyalli naḍedu tappittembavanalla śaraṇa.
Liṅgada hesara hēḷi phalapadaveṇṭatōri māruvanalla śaraṇa.
Acētanava cētanisuva pūrvakarmaviḍidu
ācarisuvavanalla śaraṇa.
Āru mūrakke tandu, trividhavanondu māḍi
bicci bērillade berasi, ondilladiraballanāgi
tarkaṅgaḷige atakrya,
saurāṣṭra sōmēśvarā nim'ma śaraṇa.