ವೇದಾಗಮಂಗಳ ದ್ವೈತಾದ್ವೈತದ ಬಗೆಗೆ ನಿಲುಕುವನಲ್ಲ,
ಅತಕ್ರ್ಯನು ಅಖಿಲಾತೀತನು ಚರಾಚರಕ್ಕೆ ಸಿಲುಕುವನಲ್ಲ.
ಅತ್ಯತಿಷ್ಠದ್ದಶಾಂಗುಲನು, ಅಹಂಕಾರವೈದದ ಅನುಪಮನು.
ಸ್ಥಾವರಜಂಗಮವಲ್ಲದ ಭರಿತನು. ಸರ್ವಜ್ಞ ಸರ್ವಕರ್ತೃ ಸೌರಾಷ್ಟ್ರ ಸೋಮೇಶ್ವರನಲ್ಲಿ ಅವಿರಳನಾದ ಶರಣ.
Art
Manuscript
Music
Courtesy:
Transliteration
Vēdāgamaṅgaḷa dvaitādvaitada bagege nilukuvanalla,
atakryanu akhilātītanu carācarakke silukuvanalla.
Atyatiṣṭhaddaśāṅgulanu, ahaṅkāravaidada anupamanu.
Sthāvarajaṅgamavallada bharitanu. Sarvajña sarvakartr̥ saurāṣṭra sōmēśvaranalli aviraḷanāda śaraṇa.