ವೈದಿಕರಪ್ಪ ವೇದವಿತ್ತುಗಳೊಂದು ಕೋಟಿಗೆ ಅನ್ನವನಿಕ್ಕಿದ ಫಲಕ್ಕೆ
ಕೋಟಿ ಮಿಗಿಲು ಶಿವಶರಣಂಗೆ ಒಂದು ಭಿಕ್ಷವನಿಕ್ಕಿದ ಫಲ.
ಕೋಟಿ ಯಜ್ಞ ಕೋಟಿ ಕನ್ಯಾದಾನದ ಫಲಕ್ಕೆ ಮಿಗಿಲು
ಒಬ್ಬ ಭಸ್ಮಾಂಗಿಯ ಒಂದು ವೇಳೆಯ ತೃಪ್ತಿ. ಅದೆಂತೆಂದೊಡೆ:
ಕ್ಷೀರಕುಂಭಸಹಸ್ರೇಣ ಘೃತಕುಂಭಶತೇನ ಚ
ಭಸ್ಮಧಾರಿಣಿನಸುಫಭಿಕ್ಷಾತಃ ಕೋಟಿಯಜ್ಞ ಫಲಂ ಭವೇತ್
ಎಂದುದಾಗಿ,
ಚತುರ್ವೇದಿಗಳಿಗೆ ಮೃಷ್ಟಾನ್ನವನಿಕ್ಕಿ
ಅಕ್ಷಪಾದಂಗೆ ಗೋವೇಧೆಯಾಯಿತ್ತು.
ಒಬ್ಬ ಶಿವಗಣನಾಥಂಗೆ ಚೋಳ ದಾಸರು ಉಣಲುಡಲಿತ್ತು,
ಯೊಡನೆ ಹೊಮ್ಮಳೆ ತವನಿಧಿಯ ಪಡೆದರು. ಇದು ಕಾರಣ,
ನೆಮ್ಮುಗೆವಿಡಿದು ಮಾಡುವ ಭಕ್ತಂಗಿದೆ ಮಾಟವಯ್ಯಾ,
ಸೌರಾಷ್ಟ್ರ ಸೋಮೇಶ್ವರಾ.