ವ್ಯಾಪಕಾಕ್ಷರದಲ್ಲಿ ನಾಲ್ಕಕ್ಷರ, ಸ್ಪರ್ಶನಾಕ್ಷರದಲ್ಲಿ ಏಕಾಕ್ಷರ,
ಇಂತೀ ಪಂಚಾಕ್ಷರವೆ ಪಂಚಬ್ರಹ್ಮಸ್ವರೂಪವು
ಶಿವಜ್ಞಾನಕ್ಕೆ ಮೂಲವೆಂದರಿತು,
ಮೂಲಪಂಚಾಕ್ಷರ, ಸ್ಥೂಲಪಂಚಾಕ್ಷರ, ಸೂಕ್ಷ್ಮಪಂಚಾಕ್ಷರ,
ಮಾಯಾಖ್ಯಪಂಚಾಕ್ಷರ, ಪ್ರಸಾದಪಂಚಾಕ್ಷರವೆಂಬ
ಪಂಚಪಂಚಾಕ್ಷರದ ಸ್ವರೂಪನರಿತು ಪಂಚಾಕ್ಷರವ ಜಪಿಸಲು
ಸೌರಾಷ್ಟ್ರ ಸೋಮೇಶ್ವರಲಿಂಗವಪ್ಪುದು ತಪ್ಪದಯ್ಯಾ.
Art
Manuscript
Music
Courtesy:
Transliteration
Vyāpakākṣaradalli nālkakṣara, sparśanākṣaradalli ēkākṣara,
intī pan̄cākṣarave pan̄cabrahmasvarūpavu
śivajñānakke mūlavendaritu,
mūlapan̄cākṣara, sthūlapan̄cākṣara, sūkṣmapan̄cākṣara,
māyākhyapan̄cākṣara, prasādapan̄cākṣaravemba
pan̄capan̄cākṣarada svarūpanaritu pan̄cākṣarava japisalu
saurāṣṭra sōmēśvaraliṅgavappudu tappadayyā.