ಶಬ್ದಶಾಸ್ತ್ರ ತರ್ಕಾಗಮಂಗಳ ಹೇಳಿ ಕೇಳಿ,
ಕಲಿತುಲಿದವರೆಲ್ಲಾ ವಿದ್ಯಾಗೂಡಾದರಲ್ಲದೆ,
ಲಿಂಗಗೂಡಾದುದಿಲ್ಲ ನೋಡಯ್ಯಾ.
ಕಲಿಕಲಿತು ಉಲಿವ ಅಭ್ಯಾಸದ ಮಾತಿಂಗೆ
ಮರುಳಪ್ಪರೆ ನಮ್ಮ ಶಿವಶರಣರು.
ಆದಿ ಅನಾದಿಗಭೇದ್ಯವಾದ ನಿಜವ ಭೇದಿಸಲರಿತು
ಮನ ಘನದಲ್ಲಿ ನಿವಾಸಿಯಾಗಬೇಕು.
ಮನ ಘನದಲ್ಲಿ ನಿವಾಸಿಯಾಗದೆ
ಸೌರಾಷ್ಟ್ರ ಸೋಮೇಶ್ವರಲಿಂಗವ ಬಲ್ಲೆನೆಂದು ನುಡಿವ
ಬರಿ ಮಾತಿನ ಬಾಯ ಬಣ್ಣದ ಸೊಲ್ಲು,
ಸಲ್ಲದೆ ಹೋಯಿತ್ತು.
Art
Manuscript
Music
Courtesy:
Transliteration
Śabdaśāstra tarkāgamaṅgaḷa hēḷi kēḷi,
kalitulidavarellā vidyāgūḍādarallade,
liṅgagūḍādudilla nōḍayyā.
Kalikalitu uliva abhyāsada mātiṅge
maruḷappare nam'ma śivaśaraṇaru.
Ādi anādigabhēdyavāda nijava bhēdisalaritu
mana ghanadalli nivāsiyāgabēku.
Mana ghanadalli nivāsiyāgade
saurāṣṭra sōmēśvaraliṅgava ballenendu nuḍiva
bari mātina bāya baṇṇada sollu,
sallade hōyittu.