Index   ವಚನ - 339    Search  
 
ಶಿವತತ್ವ ಶಿವಜ್ಞಾನ ಶಿವೈಕ್ಯವಪ್ಪ ತ್ರಿವಿಧವನರಿಯಬಲ್ಲಡೆ ಅದು ವರ್ಮ, ಅದು ಸಂಬಂಧ. ಶಿವಾದಿ ಪೃಥ್ವಿಯಂತವಪ್ಪ ತತ್ವಾಧ್ವವನರಿತು ತತ್ವಜ್ಞಾನಿಯಾಗಬಲ್ಲಡೆ ಅದು ವರ್ಮ, ಅದು ಸಂಬಂಧ. ಬ್ರಹ್ಮಾನುಸಂಧಾನದಿಂದವಿನಾಭಾವವನೆಯ್ದಿ ಶಿವೈಕ್ಯವಾಗಬಲ್ಲಡೆ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅದು ವರ್ಮ, ಅದು ಸಂಬಂಧ.