ಶಿವಭಕ್ತಿಯೆಂಬುದು ಯುಕ್ತಿಯ ಪರಿಯಂತಲ್ಲ,
ಸಾಧಕದ ಪರಿಯಂತಲ್ಲ,
ಮೂಗರು ಕಂಡ ಕನಸಿನಂತಿಪ್ಪುದು ಕಾಣಿರೆ.
ಹೇಳಿ ಕೇಳಿ ಮಾಡುವುದು ಯುಕ್ತಿಭಕ್ತಿ.
ಸಾಧಕಾಂಗದಿಂದ ಮಾಡುವುದು ಅಭ್ಯಾಸಭಕ್ತಿ.
ಮನ ಕೂರ್ತು ಮಾಡುವುದು ಮುಕ್ತಿಭಕ್ತಿ.
ಕೇಡಿಲ್ಲದೆ ಮಾಡುವುದು ನಿತ್ಯಭಕ್ತಿ.
ಇದ್ದಂತಿದ್ದು ನಿಜವ ಅಪ್ಪುವುದು ನಿಜಭಕ್ತಿ.
ಈ ನಿಜಭಕ್ತಿಯಲ್ಲಿ ಭರಿತರು
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.