ಶಿಷ್ಟೋದನವ ಲಿಂಗಕ್ಕಿತ್ತು ಪ್ರಸಾದಭೋಗ ಮಾಡುವುದಯ್ಯಾ.
ರಸಾಯನವ ಲಿಂಗಕ್ಕಿತ್ತು, ಪಾನೀಯ ಮಾಡಲಿತ್ತು,
ಪ್ರಸಾದಪಾನೀಯ ಮಾಡುವುದಯ್ಯಾ,
ಸುಗಂಧವ ಲಿಂಗಕ್ಕೆ ಘ್ರಾಣಿಸಲಿತ್ತು,
ಪ್ರಸಾದಗಂಧವ ಘ್ರಾಣಿಸುವುದಯ್ಯಾ.
ಇದಕ್ಕೆ ಶ್ರುತಿ:
ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ
ರುದ್ರೇಣ ಘ್ರಾತಂ ಜಿಘ್ರಂತಿ
ಇಂತೆಂದುದಾಗಿ,
ಪಂಚೇಂದ್ರಿಯಮುಖದಲ್ಲಿ ಲಿಂಗಪ್ರಸಾದವಲ್ಲದೆ ಭೋಗಿಸ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
Art
Manuscript
Music
Courtesy:
Transliteration
Śiṣṭōdanava liṅgakkittu prasādabhōga māḍuvudayyā.
Rasāyanava liṅgakkittu, pānīya māḍalittu,
prasādapānīya māḍuvudayyā,
sugandhava liṅgakke ghrāṇisalittu,
prasādagandhava ghrāṇisuvudayyā.
Idakke śruti:
Rudrēṇāttamaśnanti rudrēṇa pītaṁ pibanti
rudrēṇa ghrātaṁ jighranti
intendudāgi,
pan̄cēndriyamukhadalli liṅgaprasādavallade bhōgisa,
saurāṣṭra sōmēśvarā nim'ma śaraṇa.