ಶುಕ್ಲಶೋಣಿತದಲ್ಲಿ ಬಲಿದ ಕರುಳು ಕತ್ತಲೆಯಲ್ಲಿ ಬೆಳೆದು, ಮೂತ್ರನಾಳದಲ್ಲಿಳಿದು, ಕರ್ಮವೆ ಕರ್ತುವಾಗಿ,
ಕಪಟವೆ ಆಶ್ರಯವಾಗಿ, ಕೇವಲಜ್ಞಾನಶೂನ್ಯವಾಗಿ,
ಬರಿಯ ಮಾತ ಬಣ್ಣಿಸಿ, ಬಯಲ ಮಾತ ಕೊಟ್ಟು, ಬಸುರ ಮಾತ ತೆಗೆದು,
ಜಿಹ್ವೆ ಗುಹ್ಯಂಗಳ ಹೊರೆವ ಚೋರವಿದ್ಯಕ್ಕೆ
ನಿಜ ಸಾಧ್ಯವಪ್ಪುದೆ ?ಅದು ಹುಸಿ.
ಅದೆಂತೆಂದಡೆ:
ಕರ್ಮಕಾಪಟ್ಯಮಾಶ್ರಿತ್ಯ ನಿರ್ಮಲಜ್ಞಾನವರ್ಜಿತಾಃ
ವಾಗ್ಬ್ರಹ್ಮಣಿ ಪ್ರವರ್ತಂತೇ ಶಿಶ್ನೋದರಪರಾಯಣಾಃ ಇಂತೆಂದುದಾಗಿ,
ತ್ರಿಡಂಬಿಂದೊಡಲ ಹೊರೆದು ಕುಟಿಲ ತಮಗಿಲ್ಲೆಂಬ
ಡಂಭಕರನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Śuklaśōṇitadalli balida karuḷu kattaleyalli beḷedu, mūtranāḷadalliḷidu, karmave kartuvāgi,
kapaṭave āśrayavāgi, kēvalajñānaśūn'yavāgi,
bariya māta baṇṇisi, bayala māta koṭṭu, basura māta tegedu,
jihve guhyaṅgaḷa horeva cōravidyakke
nija sādhyavappude?Adu husi.
Adentendaḍe:
Karmakāpaṭyamāśritya nirmalajñānavarjitāḥ
vāgbrahmaṇi pravartantē śiśnōdaraparāyaṇāḥ intendudāgi,
triḍambindoḍala horedu kuṭila tamagillemba
ḍambhakaranēnembenayyā saurāṣṭra sōmēśvarā.