ಶುದ್ಧ ಕೇವಲಜ್ಞಾನಸ್ವರೂಪನಾದಾತ ನೀನಯ್ಯಾ.
ಅಖಿಲ ಸ್ಥಾವರಜಂಗಮಂಗಳಲ್ಲಿ
ಬೆರಸಿಯೂ ಬೆರಸದಿರ್ಪಾತ ನೀನಯ್ಯಾ.
ಸಕಲ ನಿಃಕಲನಾದಾತ ನೀನಯ್ಯಾ.
ಕೇವಲ ನಿಃಕಲದಂತೆ ನಿರಂಗನಾದಾತ ನೀನಯ್ಯಾ.
ಭವದಾರಣ್ಯವ ತಂದಾತ ನೀನಯ್ಯಾ.
ಭವರೋಗಕ್ಕೆ ಭೈಷಜ್ಯನಾದಾತ ನೀನಯ್ಯಾ.
ಸಕಲ ಜಗಜ್ಜನದಾಧಾರಾಧೇಯ ಕರ್ತೃವಾದಾತ ನೀನಯ್ಯಾ.
ಇದಕ್ಕೆ ಶ್ರುತಿ:
ತ್ವಮಗ್ನೇದ್ಯುಭಿಸ್ತ್ವಮಾಶುಶುಕ್ಷಣಿಸ್ತ್ವಮದ್ಭ್ಯಸ್ತ್ವಮಶ್ಮನಸ್ಪರಿ
ತ್ವಂ ವನೇಭ್ಯಸ್ತ್ವಮೋಷಧೀಭ್ಯಸ್ತ್ವಂ ನೃಣಾಂ ನೃಪತೇಜಾಯಸೇ ಶುಚಿಃ
ಇಂತೆಂದುದಾಗಿ,
ಪರಮನಿರ್ಮಲನಾದಾತ ನೀನೇ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Śud'dha kēvalajñānasvarūpanādāta nīnayyā.
Akhila sthāvarajaṅgamaṅgaḷalli
berasiyū berasadirpāta nīnayyā.
Sakala niḥkalanādāta nīnayyā.
Kēvala niḥkaladante niraṅganādāta nīnayyā.
Bhavadāraṇyava tandāta nīnayyā.
Bhavarōgakke bhaiṣajyanādāta nīnayyā.
Sakala jagajjanadādhārādhēya kartr̥vādāta nīnayyā.
Idakke śruti:
Tvamagnēdyubhistvamāśuśukṣaṇistvamadbhyastvamaśmanaspari
tvaṁ vanēbhyastvamōṣadhībhyastvaṁ nr̥ṇāṁ nr̥patējāyasē śuciḥ
intendudāgi,
paramanirmalanādāta nīnē saurāṣṭra sōmēśvarā.