Index   ವಚನ - 352    Search  
 
ಶ್ರದ್ಧೆ, ನೈಷ್ಠೆ, ಅವಧಾನ, ಅನುಭಾವ, ಆನಂದ, ಸಮರಸವೆಂಬ ಆರು ವಿಧದ ಭಕ್ತಿಯ ಆಯಾಯ ಲಿಂಗಂಗಳೊಳೊಂದಿಸಿ ಶ್ರವಣ ಕೀರ್ತನ ಸ್ಮರಣ ಪಾದಸೇವನ ಪೂಜನ ವಂದನ ದಾಸ್ಯ ಸಖ್ಯ ಆತ್ಮನಿವೇದನವೆಂಬ ನವವಿಧದ ಭಕ್ತಿರಸದಲ್ಲಿ ಮುಳುಗಿಪ್ಪನು. ಅದೆಂತೆಂದಡೆ: ಶ್ರವಣಂ ಕೀರ್ತನಂ ಶಂಭೋಃ ಸ್ಮರಣಂ ಪಾದಸೇವನಂ ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಂ ಎಂದುದಾಗಿ, ಇಂತಪ್ಪ ಭಕ್ತಿ ಇಲ್ಲದಡೆ ಸೌರಾಷ್ಟ್ರ ಸೋಮೇಶ್ವರನೆಂತೊಲಿವನಯ್ಯಾ