Index   ವಚನ - 353    Search  
 
ಶ್ರಮಿಸಿದುದೆ ಶ್ರಾದ್ಧ, ಪ್ರೇತವಾದುದೆ ಪ್ರೇದ್ಧ. ಇಂತೀ ಪ್ರೇದ್ಧವೆಂಬುದಿಲ್ಲವಾಗಿ ಶ್ರಾದ್ಧವೆಂಬುದಿಲ್ಲ. ಶ್ರಾದ್ಧ ಪ್ರೇದ್ಧಗಳೆಂಬುದಿಲ್ಲವಾಗಿ ತದ್ದಿನಂಗಳೆಂಬುದಿಲ್ಲ. ತದ್ದಿನಂಗಳೆಂಬುದಿಲ್ಲವಾಗಿ ಸಂಕಲ್ಪಭುಂಜನೆ ಇಲ್ಲ. ಅದೇನುಕಾರಣವೆಂದಡೆ, ಪ್ರಾಣಲಿಂಗಸಂಗದಿಂ ಲಿಂಗಪ್ರಾಣವಾಯಿತ್ತಾಗಿ, ಶಿವಪ್ರಸಾದಸೇವ್ಯದಿಂ ಪ್ರಸಾದಕಾಯವಾ[ಯಿ]ತ್ತಾಗಿ, ಇಂತಲ್ಲದೆ, ಅಂಗೋಪಜೀವಿಗಳು ತದ್ದಿನಂಗಳ ಮಾಡುವಲ್ಲಿ ``ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿಧದೇ ಪದಂ ಸಮೂಳ್ಹಮಸ್ಯಪಾಂಸುರೇ ಎಂಬ ಮನು ಮಂತ್ರದಿಂ ಸಂಕಲ್ಪಿಸಿಕೊಂಡು, ಸುರೆ ಮಾಂಸವ ಭುಂಜಿಸುವತದ್ದಿನವೆ ದೋಷದಿನ. ಇದಕ್ಕೆ ಶ್ರುತಿ: ತದ್ದಿನಂ ದಿನದೋಷೇಣ ಸುರಾಶೋಣಿತಮಾಂಸಯೋಃ ಅತಿಸಂಕಲ್ಪ್ಯ ಭುಂಜೀಯಾತ್ gõ್ಞರವಂ ನರಕಂ ವ್ರಜೇತ್ ಇಂತೆಂದುದಾಗಿ, ತದ್ದಿನ ಸೇವ್ಯ ರೌರವನರಕ ಸೌರಾಷ್ಟ್ರ ಸೋಮೇಶ್ವರಾ.