ಶ್ರೀಗುರುವಿನ ಕರುಣದಿಂದ ಪವಿತ್ರಗಾತ್ರನಾದೆ.ಅದೆಂತೆಂದಡೆ:
ಪೂರ್ವಕರ್ಮದ ದುರ್ಲಿಖಿತವನೊರಸಿ
ವಿಭೂತಿಯ ಪಟ್ಟವ ಕಟ್ಟಿದನಯ್ಯಾ ಶ್ರೀಗುರು.
ಎನ್ನಂಗದಲ್ಲಿ ಶಿವಲಿಂಗವ ಹಿಂಗದಂತಿರಿಸಿ
ಭೂತಕಾಯವ ಬಿಡಿಸಿ ಲಿಂಗತನುವ ಮಾಡಿದನಯ್ಯಾ ಶ್ರೀಗುರು.
ಕರ್ಣದಲ್ಲಿ ಪ್ರಣವಪಂಚಾಕ್ಷರವನೊರೆದು,
ಜಪಿಸ ಕಲಿಸಿ, ಮಂತ್ರರೂಪನ ಮಾಡಿದನಯ್ಯಾ ಶ್ರೀಗುರು.
ಸಂಸಾರದ ಅಜ್ಞಾನಜಡವ ಕೆಡಿಸಿ ಶಿವಜ್ಞಾನಾನುಗ್ರಹವ ಮಾಡಿದ,
ಆ ಶಿವಜ್ಞಾನವೆನ್ನ ಸರ್ವಕರ್ಮವನುರುಹಿತ್ತು.
ಅದೆಂತೆಂದೊಡೆ:
ಜ್ಞಾನಾಗ್ನಿಸ್ಸರ್ವಕರ್ಮಾಣಿ ಭಸ್ಮಸಾತ್ಕುರುತೇ[s]ರ್ಜುನ
ಎಂದುದಾಗಿ,
ಶ್ರೀಗುರುವಿನ ಪದಕಮಲದಲ್ಲಿ
ಆನು ಭೃಂಗನಾಗಿದ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Śrīguruvina karuṇadinda pavitragātranāde.Adentendaḍe:
Pūrvakarmada durlikhitavanorasi
vibhūtiya paṭṭava kaṭṭidanayyā śrīguru.
Ennaṅgadalli śivaliṅgava hiṅgadantirisi
bhūtakāyava biḍisi liṅgatanuva māḍidanayyā śrīguru.
Karṇadalli praṇavapan̄cākṣaravanoredu,
japisa kalisi, mantrarūpana māḍidanayyā śrīguru.
Sansārada ajñānajaḍava keḍisi śivajñānānugrahava māḍida,Ā śivajñānavenna sarvakarmavanuruhittu.
Adentendoḍe:
Jñānāgnis'sarvakarmāṇi bhasmasātkurutē[s]rjuna
endudāgi,
śrīguruvina padakamaladalli
ānu bhr̥ṅganāgiddenayyā saurāṣṭra sōmēśvarā.