ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ, ಘ್ರಾಣವೆಂಬ ಪಂಚೇಂದ್ರಿಯಂಗಳಲ್ಲಿ
ಪ್ರಸಾದಲಿಂಗ ಜಂಗಮಲಿಂಗ ಶಿವಲಿಂಗ
ಗುರುಲಿಂಗ ಆಚಾರಲಿಂಗವೆಂಬ
ಪಂಚಲಿಂಗಗಳು ತಮ್ಮ ತಮ್ಮ ಮುಖದೊಳು ನಿಂದು,
ಸಕಲಭೋಗಂಗಳು ಲಿಂಗಭೋಗಂಗಳಾಗಿ
ಸರ್ವೇಂದ್ರಿಯಂಗಳು ಲಿಂಗವಶವಾಗಿಪ್ಪರಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
Art
Manuscript
Music
Courtesy:
Transliteration
Śrōtra, tvakku, cakṣu, jihve, ghrāṇavemba pan̄cēndriyaṅgaḷalli
prasādaliṅga jaṅgamaliṅga śivaliṅga
guruliṅga ācāraliṅgavemba
pan̄caliṅgagaḷu tam'ma tam'ma mukhadoḷu nindu,
sakalabhōgaṅgaḷu liṅgabhōgaṅgaḷāgi
sarvēndriyaṅgaḷu liṅgavaśavāgipparayyā
saurāṣṭra sōmēśvarā nim'ma śaraṇaru.