ಸುಜ್ಞಾನಾನುಭವದಿಂ ಭವಿ ಭವವಳಿದುಳಿದ ಶೇಷನು,
ನಿರ್ಮಲ ನಿರ್ಮಾಯನಾಗಿ
ಸದ್ಗುರುಪರಶಿವಾನುಗ್ರಹ ಪ್ರಸಾದವ ಪಡೆದು
ನೆನಹಳಿದು ಉಳಿದ ಶೇಷನು,
ಅರಿವಿನ ಸುಖದ ಸವಿಯಲ್ಲೆ ಮೈಮರದ
ಘನಪರಿಣಾಮ ನಿಜನಿಂದ ಶೇಷನು.
ಸೌರಾಷ್ಟ್ರ ಸೋಮೇಶ್ವರಲಿಂಗ ಲಿಂಗೈಕ್ಯದನುಪಮ ಶೇಷ
ಪರತತ್ವವ ಬೆರಸಿ ನಿಂದಿತ್ತು.
Art
Manuscript
Music
Courtesy:
Transliteration
Sujñānānubhavadiṁ bhavi bhavavaḷiduḷida śēṣanu,
nirmala nirmāyanāgi
sadguruparaśivānugraha prasādava paḍedu
nenahaḷidu uḷida śēṣanu,
arivina sukhada saviyalle maimarada
ghanapariṇāma nijaninda śēṣanu.
Saurāṣṭra sōmēśvaraliṅga liṅgaikyadanupama śēṣa
paratatvava berasi nindittu.