ಹಿಡಿದ ವ್ರತವ ಬಿಡುವವನಲ್ಲ,
ಲಿಂಗವಲ್ಲದನ್ಯವನೊಲ್ಲ, ಅನ್ಯದೈವಕ್ಕೆರಗ,
ಮತ್ರ್ಯದ ಮನುಜರ ಮನ್ನಿಸ,
ಪರಸತಿ ಪರದ್ರವ್ಯವ ಮುಟ್ಟ,
ಕೊಟ್ಟಡೆ ಕೈಕೊಳ್ಳ, ಲಿಂಗನಿಷ್ಠಾಭಕ್ತಿಯ ಹಿಂಗ,
ಕೊಲಬಾರದ ಅರಿಗಳ ಗೆಲುವ ಕಲಿ ತಾನಾಗಿ ಅದೆಂತೆಂದೊಡೆ:
ಪರಸ್ತ್ರಿಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್
ಲಿಂಗನಿಷ್ಠಾ ನಿಯುಕ್ತಾತ್ಮಾ ಮಾಹೇಶ್ವರ ಇತಿ ಸ್ಮೃತಃ
ಎಂದುದಾಗಿ,
ಜೀವಭಾವ ಹಿಂಗಿ, ಶಿವಭಾವದಿಂ ಜೀವಿಸಿಪ್ಪನಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಮಾಹೇಶ್ವರನು.
Art
Manuscript
Music
Courtesy:
Transliteration
Hiḍida vratava biḍuvavanalla,
liṅgavalladan'yavanolla, an'yadaivakkeraga,
matryada manujara mannisa,
parasati paradravyava muṭṭa,
koṭṭaḍe kaikoḷḷa, liṅganiṣṭhābhaktiya hiṅga,
kolabārada arigaḷa geluva kali tānāgi adentendoḍe:
Parastriyaṁ parārthaṁ ca varjayēt bhāvaśud'dhimān
liṅganiṣṭhā niyuktātmā māhēśvara iti smr̥taḥ
endudāgi,
jīvabhāva hiṅgi, śivabhāvadiṁ jīvisippanayyā
saurāṣṭra sōmēśvarā nim'ma māhēśvaranu.