ಹಿಡಿಯದೆ, ಹಿಡಿದುದ ಬಿಡದೆ,
ಬಿಟ್ಟುದನಾರೂ ಅರಿಯರಲ್ಲಾ !
ಒಡಲ ಹಮ್ಮು, ಜಾತ್ಯಾಭಿಮಾನವಡಗಿ
ತೊಡದಿರ್ದ ಭಾವವನಾರೂ ಅರಿಯರಲ್ಲಾ !
ಭಾವ ಭಾವಿಸುತ ನಿರ್ಭಾವವಳವಟ್ಟ
ಭೇದವನಾರೂ ಅರಿಯರಲ್ಲಾ !
ಸೌರಾಷ್ಟ್ರ ಸೋಮೇಶ್ವರಲಿಂಗದ
ನಿಜನಿರ್ಣಯವನಾರೂ ಅರಿಯರಲ್ಲಾ !
Art
Manuscript
Music
Courtesy:
Transliteration
Hiḍiyade, hiḍiduda biḍade,
biṭṭudanārū ariyarallā!
Oḍala ham'mu, jātyābhimānavaḍagi
toḍadirda bhāvavanārū ariyarallā!
Bhāva bhāvisuta nirbhāvavaḷavaṭṭa
bhēdavanārū ariyarallā!
Saurāṣṭra sōmēśvaraliṅgada
nijanirṇayavanārū ariyarallā!