ಹೃದಯದೊಳಗಿಹನ್ನಕ್ಕ ಲಿಂಗಪ್ರಾಣಿ,
ಹೃದಯದಿಂದ ಹೊರಯಕ್ಕೆ ಹೊರವೊಂಟರೆ ಭವಿ.
ಆ ಭವಿಗೆ ಜೀವವೆಲ್ಲ ನಿರ್ಜೀವ, ಆ ಭವಿಗೆ ಉಪದೇಶವಿಲ್ಲ.
ಉಪದೇಶವ ಮಾಡಬಾರದು, ಸತ್ತರೆ ಹೂಳಬಾರದು.
ಹೂಣಿದಾತನ ಮನೆಯ ಹೊಕ್ಕು ಸುಯಿಧಾನವ ಕೊಂಡರೆ
ಕುಂಭೀಪಾತಕ ನಾಯಕನರಕ ತಪ್ಪದಯ್ಯಾ
ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Hr̥dayadoḷagihannakka liṅgaprāṇi,
hr̥dayadinda horayakke horavoṇṭare bhavi.
Ā bhavige jīvavella nirjīva, ā bhavige upadēśavilla.
Upadēśava māḍabāradu, sattare hūḷabāradu.
Hūṇidātana maneya hokku suyidhānava koṇḍare
kumbhīpātaka nāyakanaraka tappadayyā
saurāṣṭra sōmēśvarā.