ಮಾತೇ ಮಂತ್ರ, ಮಾತೇ ತಂತ್ರ, ಮಾತೇ ಯಂತ್ರ,
ಮಾತೇ ಮಾತಿನಿಂದಲಿ ಮಥನ ಮರಣವು.
ಮಾತು ತಪ್ಪಿ ಆಡುವಂಗೆ ಆತ್ಮಲಿಂಗವೆಲ್ಲಿಯದು?
ಪ್ರೇತ ಲಿಂಗಸಂಸ್ಕಾರಿಯೆಂಬವ ಮಾತಿಗೆ ತಪ್ಪುವನೆ?
ಭೂತಪ್ರಾಣಿ ಲಿಂಗಪ್ರಾಣಿಯಾಪನೆ?
ಬನ್ನಣೆ ಮಾತಿನ ರೀತಿ-
ನಿರುತವೆ ಸದಾಚಾರ, ನಿರ್ಣಯವೆ ಲೋಕಾಚಾರ,
ನಿಜ ಸ್ವರೂಪವೇ ಸದಾಚಾರ,
ಯಾತನ ಶರೀರಕ್ಕೆ ಅಳವಡದು ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Mātē mantra, mātē tantra, mātē yantra,
mātē mātinindali mathana maraṇavu.
Mātu tappi āḍuvaṅge ātmaliṅgavelliyadu?
Prēta liṅgasanskāriyembava mātige tappuvane?
Bhūtaprāṇi liṅgaprāṇiyāpane?
Bannaṇe mātina rīti-
nirutave sadācāra, nirṇayave lōkācāra,
nija svarūpavē sadācāra,
yātana śarīrakke aḷavaḍadu kāṇā
ele nam'ma kūḍalacennasaṅgamadēvayya.