Index   ವಚನ - 13    Search  
 
ಸೂತಕದೊಳು ಪುಟ್ಟಿತು ಸುಜ್ಞಾನ; ಶೀತಳದೊಳು ಅಪವಿತ್ರವೆ ಪವಿತ್ರ. ಜ್ಯೋತಿ ಹೊಲೆಯರ ಮನೆಯಲ್ಲಿರೆ ಕುಲಹೀನನೆನಬಹುದೆ? ಕಾತುರವೆ ಅಕ್ಕುಲ, ಹುಸಿಯೆಂಬುದೆ ಹೊಲೆಯ, ಹಸುವೆಂಬುದೆ ಹಾರುವ, ವಿಷಯವೆಂಬುದೆ ಮಾದಿಗ. ಜಾತಿಯ ಜನಿತದ ಮೂತ್ರದ ಕುಕ್ಷಿಯೊಳಗಣ ಮೋಹವಲ್ಲವೇನಯ್ಯ? ನೂತನ ನೂರೊಂದು ಕುಲ, ಹದಿನೆಂಟು ಸಮಯ, ಆರು ದರಿಸಿನ, ಜ್ಯೋತಿರ್ಮಯದ ಲಿಂಗದ ಗೂಡು. ಅಂಗವಿಕಾರ ಗೀತದ ಮಾತು ಅಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.