Index   ವಚನ - 15    Search  
 
ದಾನಧರ್ಮ ಪರೋಪಕಾರವೆಂಬ[ವ] ಹೀನ ಮರುಳರು ಎತ್ತ ಬಲ್ಲರಯ್ಯ? ದೀನನಾರು? ದಾನದಾರು? ಮಾನಿತ ಜ್ಞಾತ ಕೈಯಪರ ಉಪಕಾರ ಬಾನದ ಕುರುಳೊಳು ಚೇಳಹಾಕಿ ಮಡಗುವರೆ? ಜ್ಞಾನದ ವಾಕ್ಯವಲ್ಲವು. ನಾನು ನೀನುಯೆಂಬ ಧೇನುಕರ ಮಾತಿಗೆ ಮೇಘಸುರಿಯುತಿದೆ ಬೆಳೆ ಬೆಳೆಯುತಿದೆ ನಾ ನೀಡಿದೆ ನಾ ಮಾಡಿದೆ, ನಾ ಬೇಡಿದೆನೆಂಬ ಜನ್ಮಕೆ ನರಕ ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.