Index   ವಚನ - 20    Search  
 
ಗುರುಭಕ್ತಿಸ್ಥಲ ತತ್ವಜ್ಞಾನವು ಅರುಹುತರಿಗಲ್ಲದೆ ದೊರಕುವುದೆ? ದೂರಣ ಮಾರ್ಗಕೆ ಕರಿ ಕನ್ನಡಿಯೊಳಡಗಿರದೆ? ಕಾರ್ಯಕಾರಣ ಪರುಷ ಪಾಷಾಣದೊಳಗಿದ್ದರೇನು? ಪಾಷಾಣದ ಮಗನೆ? ಗುರುಸ್ಥಲದರುಹು ನರಜೀವನದವರಿಗೆ ಸಿಕ್ಕದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.