Index   ವಚನ - 22    Search  
 
ನಾನು ಭಕ್ತ, ನಾನು ಮಹೇಶ್ವರ, ನಾನು ಪ್ರಸಾದಿ, ನಾನು ಪ್ರಾಣಲಿಂಗಿ, ನಾನು ಶರಣ, ನಾನು ಐಕ್ಯನೆಂಬುದು ಅಜ್ಞಾನವಾಕ್ಯ. ವಾನರ ವನದೊಳಗಿದ್ದರೆ ಹನುಮನೆನಬಹುದೆ? ಶ್ವಾನ ಬೂದಿಯೊಳು ಹೊರಳಿದರೆ ಭಸ್ಮಾಂಗಿಯಹುದೆ? ಮಾನವರೆಲ್ಲ ಭಕ್ತರಾಪರೆ? ಮರನೆಲ್ಲ ಗಂಧ ಚಂದನವಾಪುದೆ? ಬಾನದ ಕುರುಳ ಸುಟ್ಟ ಬೂದಿಯಲ್ಲಿ ಭಸಿತವಾಪುದೆ? ನಾನು ನೀನುಯೆಂಬ ವಂತಿನ ಸಂತೆಗೆ ಜ್ಞಾನವಳವಡದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.