Index   ವಚನ - 23    Search  
 
ಒಬ್ಬರೊಬ್ಬರ ಕಂಡು ಗೊಬ್ಬರದ ಬಂಡಿಯ ಹೂಡಿದಂತೆ ನಿಬ್ಬರವಾಗಿ ಅಚ್ಚುಮುರಿದು ನಿಜಗೇಡು, ಅಪಜಯ ಇಬ್ಬಂದಿಗ ನಗುವ. ಇಷ್ಟಲಿಂಗವ ಪ್ರಾಣಲಿಂಗವೆಂದ ಕಾರಣದಿಂದ ಉಬ್ಬರವಾಯಿತು ಉಕ್ಕಿದ ಒಲೆ ತುಂಬಿತು ಗಬ್ಬಿತನದಿಂದ ಗರತಿ ಜಾರೆಯಾದಂತೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.