Index   ವಚನ - 25    Search  
 
ಜಂಗಮಕೆ ಜನನ ಮರಣವುಂಟೆ? ಸಂಗಯ್ಯ ಸಂಗದೋಷವು. ನಾನು ಎಂದ ಕಾರಣದಿಂದ ನರಕಪ್ರಾಪ್ತಿ. ಭೃಂಗ ಪುಷ್ಪದ ಕುಸುಮಕ್ಕೆರಗುವುದಲ್ಲದೆ ಕೇಸರಿಗೆರಗುವುದೆ? ಬಂಗಾರ ಮಣ್ಣಿಂದ ಪುಟ್ಟಿತ್ತು ಮಣ್ಣ ಕೂಡುವುದೆ? ಹಿಂಗಡಿಸಬಹುದೆ ತ್ರಿವಿಧವ? ವಿಷ ಪಾತಕವ ಶೃಂಗಾರಕ್ಕೆ ಕಟ್ಟಿಬಿಡುವ ಸಂಬಂಧಿಗಳಿಗೆ ಕಷ್ಟವೆಯಟ್ಟಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.