Index   ವಚನ - 26    Search  
 
ಗುರುವ ತನ್ನೊಳಗರಿವುದು ಗುಪ್ತಜ್ಞಾನವಯ್ಯ. ಪುರೋಹಿತನಾಗುವುದು ಅಂಗದ್ವಾರಕ್ಕೆ. ಪುರುಷಾರ್ಥ ಮರುಳುಗಳು ಎತ್ತ ಬಲ್ಲರು ಮಂತ್ರ ಉಪದೇಶವ? ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರುಹಿತರಿಗುಂಟಲ್ಲದೆ ಅನಂಗಿಗುಂಟೆ? ಗರಿಯಿಲ್ಲದ ಅಂಬ ಹೆದೆಯಿಲ್ಲದ ಬಿಲ್ಲಿನಲ್ಲಿ ಸ್ವರವಂದಿಗನಿಲ್ಲದೆ ಎಚ್ಚಂತೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.