Index   ವಚನ - 35    Search  
 
‘ಯದ್ಭಾವಂ ತದ್ಭವತಿ’ ಎಂಬರಲ್ಲದೆ ತದ್ಭಾವದ ಸದ್ಗತಿಯನೆತ್ತಬಲ್ಲರಯ್ಯ? ಬುದ್ಭುದಾಕಾರ ಭೂಮಿಯೊಳು ಹುಟ್ಟುಹೊಂದುಯಿಲ್ಲವೆ? ಅದ್ವೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ? ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದ್ಧಿಯಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.