Index   ವಚನ - 52    Search  
 
ದರಿದ್ರವನು ಅನುಭವಿಸಿದಲ್ಲದೆ ವೀರಧೀರತ್ವಗಳು ಅಳವಡದು. ಕಾರಿದ ಕೂಳಿಗೆ ಕೈಯ್ಯಾಂತಲ್ಲದೆ ಕರುಣಪ್ರಸಾದ ಸಿಕ್ಕದು. ಮೂರ ಮಾರಿಸಿಕೊಂಡಲ್ಲದೆ ಮಂತ್ರಪಿಂಡವಾಪುದೆ? ದೂರ ವಿಚಾರಿಸಿ ನೋಡಿದಲ್ಲದೆ ದುಃಖವಡಗದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.