Index   ವಚನ - 59    Search  
 
ಪಿಂಡಾಂಡವ ಕಾಣದವರು ಬ್ರಹ್ಮಾಂಡವನೆತ್ತ ಬಲ್ಲರಯ್ಯ ? ಮುಂಡದಲಿ ಕಾದಿ ಗೆಲ್ವೆನೆಂಬ ಮೂರ್ಖರ ಒಪ್ಪುವನೆ ಗುರು ? ಗಂಡನಿದ್ದು ಪರಪುರುಷರ ಸಂಗವ ಮಾಡುವುದು ಗರತಿಗೆ ಲಕ್ಷಣವೆ ? ಉಂಡು ತೇಗಿ ತೃಪ್ತಿವಡದಲ್ಲದೆ ಊರ್ಜಿತಮಾಗುವುದೆ ? ದಂಡವಾಯಿತು ಕ್ರೀಯದಮಾಟ, ನಿಃಕ್ರಿಯದ ಬೇಟ ಅಂಡಿನಲಿ ಅಳೆದಂತೆ ಸಟ್ಟಿಯೆಂದು ಎಂದರೆ ಖಂಡಿತವಿಲ್ಲಯಿಲ್ಲಿಂದಲಿ ಕಾಲಜ್ಞಾನ ಬರ ಸಂವತ್ಸರ ಬ್ರಹ್ಮಾಂಡದೊಳು ಸೂತ್ರ ಕಾಣೈ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.