Index   ವಚನ - 1    Search  
 
ಆಧಾರದಲ್ಲಿ ಸಾಮವೇದ, ಸ್ವಾಧಿಷ್ಠಾನದಲ್ಲಿ ಅಥರ್ವಣವೇದ. ಮಣಿಪೂರಕದಲ್ಲಿ ಯಜುರ್ವೇದ, ಅನಾಹತದಲ್ಲಿ ಋಗ್ವೇದ. ಆಜ್ಞೆಯಲ್ಲಿ ಉತ್ತರ ಖಂಡಣೆ, ವಿಶುದ್ಧಿಯಲ್ಲಿ ಪ್ರಣಮದ ಲಕ್ಷಿತ. ಇಂತೀ ವೇದವೇದ್ಯರು ನೋಡಾ ಎಮ್ಮವರು. ಲಲಾಮಭೀಮಸಂಗಮೇಶ್ವರಲಿಂಗವನೊಳಕೊಂಡ ಶರಣರಂಗ.