Index   ವಚನ - 2    Search  
 
ಕೃತಯುಗದಲ್ಲಿ ಕುಂಜರಯಾಗಕ್ಕೆ, ತ್ರೇತಾಯುಗದಲ್ಲಿ ಅಶ್ವಯಾಗಕ್ಕೆ, ದ್ವಾಪರದಲ್ಲಿ ಮಹಿಷಯಾಗಕ್ಕೆ, ಕಲಿಯುಗದಲ್ಲಿ ಅಜಯಾಗಕ್ಕೆ, ಇಂತೀ ವೇದಗಳಿಂದ ವೇದವೇದ್ಯರೆ ನೀವು? ವೇದಯಾಗಕ್ಕೆ ವಧೆಯುಂಟೆ? ಇಂತೀ ಭೇದವನರಿಯದೆ ಶಾಪಹತರುಗಳಿಗೆ ಸರ್ವಜ್ಞಾತೃದೃಷ್ಟವಪ್ಪುದೆ? ಇಂತೀ ವೇದವೇದ್ಯರು ಶಾಸ್ತ್ರಸಂಪನ್ನರು. ಪುರಾಣಪೂರ್ವಜ್ಞಾನಯುತರು, ಸಕಲಾಗಮಕ್ಕತೀತರು ಎಮ್ಮವರು, ಲಲಾಮ ಭೀಮಸಂಗಮೇಶ್ವರಲಿಂಗದೊಳಗಾದ ಶರಣರು.