Index   ವಚನ - 5    Search  
 
ನೋಡುವ ದೃಷ್ಟಿಯು ಮುಟ್ಟಿದ ಮತ್ತೆ, ಇದಿರೆಡೆಯ ಕಾಬುದಿನ್ನೇನೊ? ಕ್ರಿಯ ಸಂಪದಂಗಳ ಮರೆದು, ಅರಿವ ಅರಿವಿನ ತೆರನಿನ್ನೆಂತು? ಸಕಲವೆಂದಲ್ಲಿ ಜಗ, ನಿಃಕಲವೆಂದಲ್ಲಿ ಕಾಬ ಲಕ್ಷ. ಕಂಡು ನಿಶ್ಚೈ ಸಿದಲ್ಲಿ ಕಂಡೆಹೆನೆಂಬ ಭ್ರಾಂತು ಕಾಣಿಸಿಕೊಂಡು ಇದಿರೆಡೆಗೊಟ್ಟುವದು, ಲಲಾಮಭೀಮಸಂಗಮೇಶ್ವರಲಿಂಗವನರಿದ ಶರಣ.