Index   ವಚನ - 16    Search  
 
ಮತ್ತಮಾ ಚಿರಂನಿರ್ವಾಣದೀಕ್ಷೆಯು, ಆಜ್ಞಾದೀಕ್ಷೆಯು, ಉಪಮಾದೀಕ್ಷೆ ಸ್ವಸ್ವಿಕಾರೋಹಣ, ವಿಭೂತಿಯಪಟ್ಟ. ಕಲಶಾಭಿಷೇಕ, ಲಿಂಗಾಯತ, ಲಿಂಗ ಸ್ವಾಯತಗಳೆಂದು ಏಳು ಪ್ರಕಾರವು. ಅವರೊಳು ಗುರುವಿನಾಜ್ಞಾಪಾಲನದಲ್ಲಿ ಸಮರ್ಥವಾದುದು ಆಜ್ಞಾದೀಕ್ಷೆ ಎನಿಸಿಕೊಂಬುದು. ಪುರಾತನರುಗಳ ಸಮಯಾ ಚಾರಕ್ಕೆ ಸದೃಶವಾದುದು ಉಪಮಾದೀಕ್ಷೆ ಸ್ವಸ್ತಿಕವೆಂಬ ಮಂಡಲದ ಮೇಲೆ ಶಿಷ್ಯ ನ ಕುಳ್ಳಿರಿಸಿ,ಮಂತ್ರನ್ಯಾಸಮಂ ಮಾಡಿ, ಮಂತ್ರಪಿಂಡವಾಗಿ ಮಾಡುವದು ಸ್ವಸ್ತಿ ಕಾರೋಹಣ. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ವಿಭೂತಿಧಾರಣವು ವಿಭೂತಿಯಪಟ್ಟ. ಪಂಚಕಲಶಂಗಳಲ್ಲಿ ತೀರ್ಥೋದಕಗಳಂ ತುಂಬಿ ಶಿವಕಲಾ ಸ್ಥಾಪನಂ ಮಾಡಿ, ಆ ಕಲಶೋದಕಂಗಳಿಂ ಶಿಷ್ಯಂಗೆ ಸ್ನಪನವಂ ಮಾಡೂದು ಕಲ ಶಾಭಿಷೇಕ. ಆಚಾರ್ಯನು ಶಿಷ್ಯಂಗೆ ಉಪದೇಶಿಸಲ್ತಕ್ಕೆ ಲಿಂಗಮಂ ತಾನು ಆರ್ಚನೆ ಯಂ ಮಾಡಿ, ಶಿಷ್ಯನಂ ನೋಡಿಸುವುದು ಲಿಂಗಾಯತವೆನಿಸಿಕೊಂಬುದು. ಆ ಶ್ರೀಗುರುನಾಥನಿಂದುಪದಿಷ್ಟವಾದ ಪ್ರಾಣಲಿಂಗವನು ಶಿಷ್ಯನು ಭಕ್ತಿಯಿಂ ಸ್ವೀಕ ರಿಸಿ, ತನ್ನ ಉತ್ತಮಾಂಗಾದಿ ಸ್ಥಾನಂಗಳಲಿ ಧರಿಸೂದು ಲಿಂಗಸ್ವಾಯತವೆನಿಸಿಕೊಂ ಬುದು. ಇಂತೆಂದುಕಾಮಿಕಂ ಪೇಳೂದಯ್ಯ, ಶಾಂತವೀರಪ್ರಭುವೆ.