Index   ವಚನ - 17    Search  
 
ಮತ್ತಮಾ ಸ್ವಾಯತದೀಕ್ಷೆಯು ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆ ಎಂದು ಮೂರು ಪ್ರಕಾರಮಪ್ಪುದು. ಅವಾವೆಂದೊಡೆ:ಗುರು ಶಿಷ್ಯನ ಮಸ್ತಕದಲಿ ಆಗಮೋಕ್ತ ವಿಧಾನದಿಂ ಶಿವಾಸನವನು ಧ್ಯಾನಿಸಿ, ಅಲ್ಲಲ್ಲಿ ಅವುದಾ ನೊಂದು ಶಿವತತ್ವಸಮಾವೇಶವು ವೇಧಾದೀಕ್ಷೆ ಎನಿಸಿಕೊಂಬುದು. ದೇವತಾದಿ ಗಳು ಸಹವಾಗಿ ಮಂತ್ರೋಪದೇಶವನು ಮಾಡುವುದು ಮಂತ್ರದೀಕ್ಷೆ ಎನಿಸಿ ಕೊಂಬುದು. ದೀಕ್ಷೋತ್ತರ ಕ್ರಿಯೆಗೂಡಿ ಪ್ರಾಣಲಿಂಗೋಪದೇಶವನು ಮಾಡು ವುದು ಕ್ರಿಯಾದೀಕ್ಷೆ ಎನಿಸಿಕೊಂಬುದು. ಇಂತೆಂದು[ದು]ವಾ ತೂಳಂ. ಮತ್ತಮಾ ಗುರುವು ಶಿಷ್ಯನ ಕರ್ಣದಲ್ಲಿ ಮಂತ್ರೋಪದೇಶವ ಮಾಡೂದೇ ಮಂತ್ರದೀಕ್ಷೆ. ಶಿಷ್ಯನ ಹಸ್ತದಲ್ಲಿ ಗುರುವು ಲಿಂಗವ ಕೊಡುವುದೆ ಕ್ರಿಯಾದೀಕ್ಷೆ. ಗುರು ತನ್ನಹಸ್ತವ ಶಿಷ್ಯನ ಮಸ್ತಕದಲ್ಲಿಡುವುದೆ ವೇಧಾದೀಕ್ಷೆ ಎನಿಸುವುದ[ಯ್ಯಾ]ಶಾಂತವೀರ ಪ್ರಭುವೇ.