ಮತ್ತಮಾ ಚಿರಂನಿರ್ವಾಣದೀಕ್ಷೆಯು, ಆಜ್ಞಾದೀಕ್ಷೆಯು, ಉಪಮಾದೀಕ್ಷೆ
ಸ್ವಸ್ವಿಕಾರೋಹಣ, ವಿಭೂತಿಯಪಟ್ಟ. ಕಲಶಾಭಿಷೇಕ, ಲಿಂಗಾಯತ, ಲಿಂಗ
ಸ್ವಾಯತಗಳೆಂದು ಏಳು ಪ್ರಕಾರವು. ಅವರೊಳು ಗುರುವಿನಾಜ್ಞಾಪಾಲನದಲ್ಲಿ
ಸಮರ್ಥವಾದುದು ಆಜ್ಞಾದೀಕ್ಷೆ ಎನಿಸಿಕೊಂಬುದು. ಪುರಾತನರುಗಳ ಸಮಯಾ
ಚಾರಕ್ಕೆ ಸದೃಶವಾದುದು ಉಪಮಾದೀಕ್ಷೆ ಸ್ವಸ್ತಿಕವೆಂಬ ಮಂಡಲದ ಮೇಲೆ ಶಿಷ್ಯ
ನ ಕುಳ್ಳಿರಿಸಿ,ಮಂತ್ರನ್ಯಾಸಮಂ ಮಾಡಿ, ಮಂತ್ರಪಿಂಡವಾಗಿ ಮಾಡುವದು ಸ್ವಸ್ತಿ
ಕಾರೋಹಣ. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ವಿಭೂತಿಧಾರಣವು
ವಿಭೂತಿಯಪಟ್ಟ. ಪಂಚಕಲಶಂಗಳಲ್ಲಿ ತೀರ್ಥೋದಕಗಳಂ ತುಂಬಿ ಶಿವಕಲಾ
ಸ್ಥಾಪನಂ ಮಾಡಿ, ಆ ಕಲಶೋದಕಂಗಳಿಂ ಶಿಷ್ಯಂಗೆ ಸ್ನಪನವಂ ಮಾಡೂದು ಕಲ
ಶಾಭಿಷೇಕ. ಆಚಾರ್ಯನು ಶಿಷ್ಯಂಗೆ ಉಪದೇಶಿಸಲ್ತಕ್ಕೆ ಲಿಂಗಮಂ ತಾನು ಆರ್ಚನೆ
ಯಂ ಮಾಡಿ, ಶಿಷ್ಯನಂ ನೋಡಿಸುವುದು ಲಿಂಗಾಯತವೆನಿಸಿಕೊಂಬುದು. ಆ
ಶ್ರೀಗುರುನಾಥನಿಂದುಪದಿಷ್ಟವಾದ ಪ್ರಾಣಲಿಂಗವನು ಶಿಷ್ಯನು ಭಕ್ತಿಯಿಂ ಸ್ವೀಕ
ರಿಸಿ, ತನ್ನ ಉತ್ತಮಾಂಗಾದಿ ಸ್ಥಾನಂಗಳಲಿ ಧರಿಸೂದು ಲಿಂಗಸ್ವಾಯತವೆನಿಸಿಕೊಂ
ಬುದು. ಇಂತೆಂದುಕಾಮಿಕಂ ಪೇಳೂದಯ್ಯ, ಶಾಂತವೀರಪ್ರಭುವೆ.
Art
Manuscript
Music
Courtesy:
Transliteration
Mattamā cirannirvāṇadīkṣeyu, ājñādīkṣeyu, upamādīkṣe
svasvikārōhaṇa, vibhūtiyapaṭṭa. Kalaśābhiṣēka, liṅgāyata, liṅga
svāyatagaḷendu ēḷu prakāravu. Avaroḷu guruvinājñāpālanadalli
samarthavādudu ājñādīkṣe enisikombudu. Purātanarugaḷa samayā
cārakke sadr̥śavādudu upamādīkṣe svastikavemba maṇḍalada mēle śiṣya
na kuḷḷirisi,mantran'yāsamaṁ māḍi, mantrapiṇḍavāgi māḍuvadu svasti
kārōhaṇa. Āgamōktasthānaṅgaḷalli tattanmantraṅgaḷiṁ vibhūtidhāraṇavu
Vibhūtiyapaṭṭa. Pan̄cakalaśaṅgaḷalli tīrthōdakagaḷaṁ tumbi śivakalā
sthāpanaṁ māḍi, ā kalaśōdakaṅgaḷiṁ śiṣyaṅge snapanavaṁ māḍūdu kala
śābhiṣēka. Ācāryanu śiṣyaṅge upadēśisaltakke liṅgamaṁ tānu ārcane
yaṁ māḍi, śiṣyanaṁ nōḍisuvudu liṅgāyatavenisikombudu. Ā
śrīgurunāthanindupadiṣṭavāda prāṇaliṅgavanu śiṣyanu bhaktiyiṁ svīka
risi, tanna uttamāṅgādi sthānaṅgaḷali dharisūdu liṅgasvāyatavenisikoṁ
budu. Intendukāmikaṁ pēḷūdayya, śāntavīraprabhuve.