ಮತ್ತಂ ಶಿವನು ಸರ್ವಾನುಗ್ರಹಕರ್ತೃವಹತನದಿಂದ ಬಾಲರು ಬಾಲಿಶರು
ಭೋಗೀಶರುಗಳಿಗೆ ಅನುಗ್ರಹಮಾಡಲ್ತಕ್ಕುದೆಂಬಲ್ಲಿ, ಆಯಾ ಅನುಗ್ರಹವು
ಅವರವರ ಸಂಸ್ಕಾರ ಪೂರ್ವಕವಾಗಿದ್ದಂಥಾದು. ಮತ್ತಮಾ ಸಂಸ್ಕಾರದಿಂದವೆ
ಮುಕ್ತಿಯಪ್ಪುದೆಂದೊಡೆ ಕ್ರಿಯಾಜ್ಞಾನವ್ರತ ಮೊದಲಾದ ಉಪಾಯಂಗಳಿಗೆ
ಕಾರಣವಿಲ್ಲದೆ ಹೋಗುವುದು. ಇಂತೆಂಬ ಚೋದ್ಯಮಂ ಪರಿಹರಿಸುತ್ತಿದನು.
ಆರು ಕೆಲಂಬರು ಹೇಗೆ ಇದಾರು ಅವರಿಗೆ ಹಾಗೆ ಶಿವನು ಅನುಗ್ರಹ
ಮಾಡುವನು. ಅದು ಹೇಗೆಂದೊಡೆ: ಕೆಲಂಬರು ಕ್ರಿಯಾಯೋಗ್ಯರು, ಅವರಿಗೆ
ಕ್ರಿಯೆಯಿಂದವೆ ಮುಕ್ತಿಯಪ್ಪುದು. ಕೆಲಂಬರು ಜ್ಞಾನಯೋಗ್ಯರು. ಕೆಲಂಬರು
ಚರ್ಯಾಯೋಗ್ಯರು. ಕೆಲಂಬರು ಯೋಗಾರ್ಹರು. ಈ ಪ್ರಕಾರದಲ್ಲಿ ಅರಿಗೆ
ಅವುದರಿಂ ಮೋಕ್ಷವು ಪೇಳಲ್ಪಟ್ಟಿತ್ತು, ಅದು ಶಿವನ ಕೃಪೆಯತ್ತಣಿಂದಪ್ಪುದು.
ಅದು ಕಾರಣ, ಜ್ಞಾನಾದ್ಯು ಪಾಯಂಗಳಿಗೆ ದೀಕ್ಷೆ ಕಾರಣವೆಂದುಇಚ್ಚೈಸಲ್ಪಡುತ್ತಿ
ದ್ದಿತು. ಅಂತದರಿಂ ದೀಕ್ಷೆಯಿಂದವೆ ಮೋಕ್ಷಮಪ್ಪುದು, ಉಪಾಯವೆ ನಿಯಾಮಕ
ಮಪ್ಪುದು. ಮತ್ತಂ ಶಿವನು ಸರ್ವಾನುಗ್ರಹಕ್ಕೆ ಕರ್ತೃವಾದ ಕಾರಣ, ಆ ಉಪಾ
ಯಂಗಳು ಶಿವನಿಂದವೆ ಉದಿತವಾಗಿದ್ದಂಥಾವು. ಇಂತೆಂದು ಕಾರಣಾಗಮ
ಪೇಳೂದಯ್ಯಾ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Mattaṁ śivanu sarvānugrahakartr̥vahatanadinda bālaru bāliśaru
bhōgīśarugaḷige anugrahamāḍaltakkudemballi, āyā anugrahavu
avaravara sanskāra pūrvakavāgiddanthādu. Mattamā sanskāradindave
muktiyappudendoḍe kriyājñānavrata modalāda upāyaṅgaḷige
kāraṇavillade hōguvudu. Intemba cōdyamaṁ pariharisuttidanu.
Āru kelambaru hēge idāru avarige hāge śivanu anugraha
māḍuvanu. Adu hēgendoḍe: Kelambaru kriyāyōgyaru, avarige
kriyeyindave muktiyappudu. Kelambaru jñānayōgyaru. KelambaruCaryāyōgyaru. Kelambaru yōgār'haru. Ī prakāradalli arige
avudariṁ mōkṣavu pēḷalpaṭṭittu, adu śivana kr̥peyattaṇindappudu.
Adu kāraṇa, jñānādyu pāyaṅgaḷige dīkṣe kāraṇavendu'iccaisalpaḍutti
dditu. Antadariṁ dīkṣeyindave mōkṣamappudu, upāyave niyāmaka
mappudu. Mattaṁ śivanu sarvānugrahakke kartr̥vāda kāraṇa, ā upā
yaṅgaḷu śivanindave uditavāgiddanthāvu. Intendu kāraṇāgama
pēḷūdayyā, śāntavīrēśvarā.