ಮತ್ತಂ ಪರಮಕಾರಣನಾದ ಶಿವನು ಗ್ರಾಹ....ತಿ ಬ್ರಾಹ್ಮಣಾದಿ ವರ್ಣಗಳು
ನ್ಯೂನಾಧಿಕವಹತದಿಂದಿದ್ದಂಥಾವು. ಅವರವರ ಸಂಸ್ಕಾರವೂ ಆ ಪ್ರಕಾರವೇ
ಆಗಬೇಕು. ಅಂತದರಿಂ ಫಲವು ಈ ಪ್ರಕಾರವೇಕಾಗದು? ಇಂತೆಂದು
ಕಿರಣದಲ್ಲಿ ಚೋದ್ಯಮಂ ಪ್ರಶ್ನೋತ್ತರ ಕ್ರಮದಿಂ ಪರಿಹರಿಸುತ್ತಿದ್ದಾನು. ಸಂಸ್ಕಾ
ರವು ಆತ್ಮಂಗೆ ಅಪ್ಪುದು, ಜಾತಿಗೂ ಇಲ್ಲ ಶರೀರಕ್ಕೂ ಇಲ್ಲ. ಇತ್ತಲಾನು ಜಾತಿಗೆ
ಸಂಸ್ಕಾರವಪ್ಪೊಡೆ ಒಬ್ಬನು ದೀಕ್ಷಿತನಾಗಲಾಗಿ ಸರ್ವರೂ ದೀಕ್ಷಿತರಾಗಬೇಕು.
ಅಂತದರಿಂ ಜಾತಿಗೆ ಸಂಸ್ಕಾರವಿಲ್ಲ. ಮತ್ತಂ ಶರೀರವು ಜಡವಹತನದಿಂದವಕ್ಕೆ
ಸಂಸ್ಕಾರವಿಲ್ಲ. ಅಂತದರಿಂ ಸರ್ವಾನುಗ್ರಾಹಕನಾದ ಶಿವನು ಚಿದ್ರೂಪರಾದ
ಆತ್ಮರುಗಳನ್ನು ಅನುಗ್ರಹಿಸುವನಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Mattaṁ paramakāraṇanāda śivanu grāha....Ti brāhmaṇādi varṇagaḷu
n'yūnādhikavahatadindiddanthāvu. Avaravara sanskāravū ā prakāravē
āgabēku. Antadariṁ phalavu ī prakāravēkāgadu? Intendu
kiraṇadalli cōdyamaṁ praśnōttara kramadiṁ pariharisuttiddānu. Sanskā
ravu ātmaṅge appudu, jātigū illa śarīrakkū illa. Ittalānu jātige
sanskāravappoḍe obbanu dīkṣitanāgalāgi sarvarū dīkṣitarāgabēku.Antadariṁ jātige sanskāravilla. Mattaṁ śarīravu jaḍavahatanadindavakke
sanskāravilla. Antadariṁ sarvānugrāhakanāda śivanu cidrūparāda
ātmarugaḷannu anugrahisuvanayyā śāntavīrēśvarā.