Index   ವಚನ - 21    Search  
 
ಮತ್ತಂ ದೀಕ್ಷೆಯಿಂ ಸಮಸ್ತ ಪಾಶಂಗಳು ತೊಲಗು[ವ]ವಪ್ಪಡೆ ದೀಕ್ಷೆಯಾ ಗಿಯೂ ಶರೀರಸ್ಥಿತಿಯೆಂತು ಸಂಭವಿಪುದೆಂಬ ಚೋದ್ಯಮಂ ದೃಷ್ಟಾಂತಪೂರ್ವಕ ವಾಗಿ ಪರಿಹರಿಸುತ್ತಿದ್ದನು. ಘಟನಿಷ್ಪತ್ತಿಯಾದರೂ ಮತ್ತೂಪರಿಭ್ರಮಿಸುತ್ತಿರ್ದ ಕುಲಾಲಚಕ್ರವೆಂತಂತೆ ದೀಕ್ಷೆಯಾದರೂ ದೀಕ್ಷೋತ್ತರ ಕ್ರಿಯಾವಸ್ಥಾನ ಪರ್ಯಂತರವಾಗಿ ಪ್ರಾರಬ್ಧ ಕರ್ಮವಾಸನೆಯಿಂದ ಶರೀರಸ್ಥಿತಿ ಸಂಭವಿಪ್ಪುದು. ಮತ್ತಂ ಘಟದೊಳಗಿದ್ದ ದೀಪವು ಘಟವೊಡೆಯಲಾಗಿ, ಘಟದೊಳಗಿರ್ದ ದೀಪ ಎಲ್ಲಾ ಕಡೆಯಲ್ಲಿಯೂ ಎಂತು ಪ್ರಕಾಶಿಸುವುದಂತೆ ದೀಕ್ಷಿತನು ದೇಹಾವಸಾನದಲ್ಲಿ ಪರಮುಕ್ತನಪ್ಪನು. ಇಂತೆಂದು ಕಿರಣಂ ಪೇಳ್ದಪುದು, ಶಾಂತವೀರೇಶ್ವರಾ.