ಮತ್ತಂ ಸಮಸ್ತಪಾಶಂಗಳು ತೊಲಗಲೋಸ್ಕರ ದೀಕ್ಷೆ ಮಾಡಲ್ಪಟ್ಟಿತ್ತು.
ಅಂತಾದೊಡೆ ದೀಕ್ಷೆಯಾಗಿಯೂ ಕರ್ಮಾಧಿಕಂಗಳು ಏನು ಕಾರಣ ತೊಲಗವು?
ಇಂತೆಂಬ ಚೋದ್ಯಮಂ ಕಿರಣದಲಿ ಪ್ರಶ್ನೋತ್ತರ ಕ್ರಮದಿಂದ ದೃಷ್ಟಾಂತ
ಪೂರ್ವಕವಾಗಿ ತೊಲಗಿಸುತ್ತಿದ್ದಾನು. ಅದೆಂತೆಂದೊಡೆ: ಸಿದ್ಧವಾದ ಮಂತ್ರಂಗ
ಳಿಂದ ಅಮೂರ್ತವಾದ ವಿಷಯ ಶಕ್ತಿಗೆ ಕ್ಷಯವೆಂತಂತೆ ಅಂಕುರೋತ್ಪತ್ತಿಗೆ
ಕಾರಣವಾದ ಬೀಜವೆಂತು ಹುರಿಯಲ್ಪಡುವ[ದೆಂತಂತೆ] ದೀಕ್ಷಾಕಾಲದ ಪ್ರಸಿದ್ಧ
ವಾದ ಮಂತ್ರಂಗಳಿಂದ ಅನೇಕ ಭವಂಗಳಲ್ಲಿ ಮಾಡಲ್ಪಟ್ಟ. ಭವಬೀಜಂಗಳಾದ
ಕರ್ಮಂಗಳು ಸುಡಲ್ಪಟ್ಟವು. ಆಗಾಮಿ ಕರ್ಮಂಗಳು ತಡೆಯಲ್ಪಟ್ಟವು. ಪ್ರಾರ
ಬ್ಧಕರ್ಮವು ಭೋಗಾಂತರದಲ್ಲಿ ಕೆಡಲ್ಪಟ್ಟಿತು. ಇಂತೆಂದು ಕಿರಣಂ, ಗರುಡ
ಉವಾಚ: `ಪಾಶವಿಶ್ಲೇಷಣಾರ್ಥಂತು ನ್ಯ ದೀಕ್ಷಾಚ ಕ್ರಿಯತೇ ಕಿಲ| ವಿಶ್ಲೇ
ಷೋSಪಿನ [ಈಶ್ವರ] ದೃಷ್ಟತ್ವಾತ್ಕಥಂ ವದ ಭವಾನೆ ಹೋ|| ವಾಚ ಪಾಶ
ಸ್ತೋಮಃ ಕ್ಷಯಃ ಸಿದ್ಧಃ ಸಂಸಿದ್ಧಿಃ ಸೋSಪಿ ಶಂಬರೈಃ ಶಂಬರಾಣಾಮಚಿಂತ್ಯತ್ವಾ
ದ್ಯಥಾ ಮೂರ್ತಿ ವಿಚಕ್ಷಯಃ|| ಅನೇಕ ಭವಿ ಕರ್ಮದಗ್ಧಂ ಬೀಜಮಿವಾಣುಭಿಃ|
ಭವಿಷ್ಯದಪಿ ಸಂರುದ್ಧಂಯಯೇದಂ ತದ್ಧಿ ಭೋಗತಃ|| ಇಂತೆಂದು ಕಿರಣಾಗಮಂ ಪೇಳೂದಯ್ಯ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Mattaṁ samastapāśaṅgaḷu tolagalōskara dīkṣe māḍalpaṭṭittu.
Antādoḍe dīkṣeyāgiyū karmādhikaṅgaḷu ēnu kāraṇa tolagavu?
Intemba cōdyamaṁ kiraṇadali praśnōttara kramadinda dr̥ṣṭānta
pūrvakavāgi tolagisuttiddānu. Adentendoḍe: Sid'dhavāda mantraṅga
ḷinda amūrtavāda viṣaya śaktige kṣayaventante aṅkurōtpattige
kāraṇavāda bījaventu huriyalpaḍuva[dentante] dīkṣākālada prasid'dha
vāda mantraṅgaḷinda anēka bhavaṅgaḷalli māḍalpaṭṭa. Bhavabījaṅgaḷāda
karmaṅgaḷu suḍalpaṭṭavu. Āgāmi karmaṅgaḷu taḍeyalpaṭṭavu. Prāra
Bdhakarmavu bhōgāntaradalli keḍalpaṭṭitu. Intendu kiraṇaṁ, garuḍa
uvāca: `Pāśaviślēṣaṇārthantu n'ya dīkṣāca kriyatē kila| viślē
ṣōSpina [īśvara] dr̥ṣṭatvātkathaṁ vada bhavāne hō|| vāca pāśa
stōmaḥ kṣayaḥ sid'dhaḥ sansid'dhiḥ sōSpi śambaraiḥ śambarāṇāmacintyatvā
dyathā mūrti vicakṣayaḥ|| anēka bhavi karmadagdhaṁ bījamivāṇubhiḥ|
bhaviṣyadapi sanrud'dhanyayēdaṁ tad'dhi bhōgataḥ|| intendu kiraṇāgamaṁ pēḷūdayya, śāntavīrēśvarā.