ಸಾಕ್ಷಿ:`ಶೈವಂ ಚತುರ್ವಿಧಂ ಜ್ಞೇಯಂ ಸಮಾಸಾತ್ ಶ್ರುಣು ಷಣ್ಮುಖ||
ಸಾಮಾನ್ಯಂ ಮಿಶ್ರಕಂ ಶೈವಂ ಶುದ್ಧಂ ವೀರಂ ಯಥಾ ಕ್ರಮಂ'||
ಇಂತೆಂದು ಶಿವ ಸಂಬಂಧವಾದ ದರ್ಶನವು ನಾಲ್ಕು ಪ್ರಕಾರವಾಗಿದಂಥಾದೆಂದು
ಅರಿಯಲ್ತಕ್ಕುದು. ಆ ಚತುರ್ವಿಧ [ದ]ಲಿ ಶೈವವನು ಹೇಳಿಹನು ಎಲೆ ಷಣ್ಮುಖನೆ ಕೇಳು,
ಅವಾವವೆಂದೊಡೆ:ಸಾಮಾನ್ಯ ಶೈವ ಮಿಶ್ರಶೈವ ಶುದ್ಧಶೈವ ವೀರಶೈವವೆಂದು
ಕ್ರಮದಿಂದಪ್ಪುವೆಂದು ಶಿವನು ನಿರೂಪಿಸುತ್ತಿದ್ದನಯ್ಯಾ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Sākṣi:`Śaivaṁ caturvidhaṁ jñēyaṁ samāsāt śruṇu ṣaṇmukha||
sāmān'yaṁ miśrakaṁ śaivaṁ śud'dhaṁ vīraṁ yathā kramaṁ'||
intendu śiva sambandhavāda darśanavu nālku prakāravāgidanthādendu
ariyaltakkudu. Ā caturvidha [da]li śaivavanu hēḷihanu ele ṣaṇmukhane kēḷu,
avāvavendoḍe:Sāmān'ya śaiva miśraśaiva śud'dhaśaiva vīraśaivavendu
kramadindappuvendu śivanu nirūpisuttiddanayyā, śāntavīrēśvarā.