Index   ವಚನ - 24    Search  
 
`ತತ್ರಾದೌ ಸಂಪ್ರವಕ್ಷ್ಯಾಮಿ ಶೈವ ಸಾಮಾನ್ಯಲಕ್ಷಣಂ' ಎಂದು ಆ ನಾಲ್ಕು ವಿಧವಾದ ಶೈವಂಗಳೊಳಗೆ ಮೊದಲು ಸಾಮಾನ್ಯ ಶೈವಲಕ್ಷಣವ ಹೇಳಿಹೆನು: `ಶಿವಲಿಂಗಂ ಯಥಾ ಪಶ್ಯೇತ್ತದಾ ಕುರ್ಯಾತ್ಸಮರ್ಚನಂ| ಪ್ರದಕ್ಷಿಣಾಂ ಮ ಪ್ರಣ ತಿಂ ದರ್ಶನಂ ವಾSತ್ರ ಕಾರಯೇತ್|| ಭಸ್ಮಧಾರಣಮಾತ್ರೇಣ ಶುದ್ಧೋ ಭವತಿ ಸರ್ವದಾ| ಶಿವಕಿ....ತದಾರೋಪೇ ಪ್ರೀತಿಮಾನ್ ಶಿವಭಕ್ತಕೇ|| ಏತೇಷಾಂ ನಿಯತಿರ್ನಾಸ್ತಿ ಯಥಾ ಲಬ್ಧಂ ಸಮಾಚರೇತ್' ಇಂತೆಂದುದಾಗಿ ಅವನಾನೊಬ್ಬ ಸಾಮಾನ್ಯ ಶೈವನು ವಿಭೂತಿಯಪಟ್ಟ ಮಾತ್ರದಿಂದವೆ ಶುದ್ಧವಾಗುತ್ತಿದ್ದಾತನಾಗಿ ಸ್ವಯಂಭುಲಿಂಗವನಾದರೆಯೂ ದೇವದಾನವಮಾನವಾದಿಗಳಿಂ ಪ್ರತಿಷ್ಠಿಸ ಲ್ಪಟ್ಟ ಲಿಂಗನಾದರೆಯೂ ಅವ ವೇಳೆಯಲ್ಲಿ ಕಂಡನು, ಆ ವೇಳೆಯಲ್ಲಿ ಅರ್ಚನೆ ಯನಾದರೂ ಮಾಡೂದು, ಪ್ರದಕ್ಷಿಣ ದರ್ಶನ ನಮಸ್ಕಾರವನಾದಡೆಯೂ ಮಾಡುವುದು, ಶಿವಕೀರ್ತಿ ಶಿವನ ವಚನ ಶಿವಭಕ್ತರಲ್ಲಿ ಪ್ರೀತಿಯುಳ್ಳಾತನಹನು. ಈ ಶಿವಾರ್ಚನಾದಿಗಳಲ್ಲಿ ಸಂಪೂರ್ಣ ನಿಯತಿಯಿಲ್ಲದೆ ಇದ್ದರೆ ಯಥಾ ಲಬ್ಧ ವಾದ ಕ್ರೀಗಳನಾಚರಿಸುವುದು. ಮತ್ತಂ, `ಸಾಮಾನ್ಯ ಲಕ್ಷಣಂ ಪ್ರೋಕ್ತಂವಕ್ಷೇ ಮಿಶ್ರಸ್ಯ ಲಕ್ಷಣಂ'-ಸಾಮಾನ್ಯ ಶೈವ ಲಕ್ಷಣವು ನಿರೂಪಿಸಲ್ಪಟ್ಟಿತ್ತು. ಮಿಶ್ರಶೈವಲ ಕ್ಷಣವನು ನಿರೂಪಿಸಿಹೆನು ಕೇಳಿಂದು ಶಿವನು ಷಣ್ಮುಖದೇವರಿಗೆ ಉಪದೇಶಿಸುತ್ತಿ ರ್ದನಯ್ಯ, ಶಾಂತವೀರೇಶ್ವರಾ.