ಪರಾರ್ಥಪೂಜೆಯನಾಯಿತ್ತಾದೊಡೆ, ಅಲ್ಲಿಂದ ಮೇಲೆ ಕೇಳು: `ಗ್ರಾಮಾದೌ
ಸ್ಥಾಪಿತೇ ಲಿಂಗೇ ಯದ್ವಾದೈವಾದಿ ನಿರ್ಮಿತೇ ಪರಾರ್ಥಮಿತಿಜ್ಞೇಯಂ
ಸರ್ವಪ್ರಾಣಿತಾವಹಿ' ಇಂತೆಂದು ಆವುದಾನೊಂದು ಕಾರಣದಿಂದ ದೇವ ಋಷಿ
ದಾನವ ಮಾನವಾದಿಗಳಿಂದ ನಿರ್ಮಿಸಿ, ಗ್ರಾಮಗಿರಿ ಗಂಹರವನ ಮೊದಲಾದವ
ರಲ್ಲಿ ಪ್ರತಿಷ್ಠಿತವಾದ ಶಿವಲಿಂಗಪೂಜೆ ಪರಾರ್ಥ ಪೂಜೆ ಎಂದು ಅರಿಯ
ಬೇಕಾದುದು. ಆ ಪೂಜೆಯಲ್ಲಿ ಪ್ರಾಣಿಗಳಿಗೆಯೂ ಹಿತವ ಮಾಡುವಂಥಾದು
`ಶಿವದ್ವಿಜೇನ ಕರ್ತನ್ಯಂ ದ್ವಿಧಾ ಪೂಜೇತಿ ಬೋಧಿತಾ' ಎಂದು ಈ ಕ್ರಮದಿಂದ
ಹೇಳಲ್ಪಟ್ಟ ಎರಡು ಪ್ರಕಾರದ ಪೂಜೆ ಶಿವಬ್ರಾಹ್ಮಣನಿಂದವೆ ಮಾಡಲ್ತಕ್ಕಂಥಾದು
ಶಾಂತವೀರೇಶ್ವರಾ.