Index   ವಚನ - 36    Search  
 
`ಮಂತ್ರಪಿಂಡ ಹೃದಂಭೋಜೇ ವಾಸ ಮಂತ್ರಸ್ಯ ಭಾವತಃ| ಆಹ್ವಾಸಾತ್ಸಮ ಸಂಯುಕ್ತೇ ಲಿಂಗೇ ಪೂಜಾತಿಕಂ ಭವೇತ್' ಎಂ[ಬುವ] ಮಂತ್ರಪಿಂಡವಪ್ಪ ತನ್ನ ಹೃದಯಕಮಲದಲ್ಲಿ ಆಹ್ವಾನದ ದೆಸೆಯಿಂದ ಸಂಯುಕ್ತವಾದ ಶಿವಲಿಂಗದಲ್ಲಿ ಮಂತ್ರಪತಿಯಪ್ಪ ವರ್ಣವಾಸ ಮೊದಲಾಗಿ ಶಿವವಾಸ ಪರ್ಯಂತರವಾದ ವಾಸಮಂತ್ರಭಾವದಿಂದ ಲಿಂಗಪೂಜೆಯೆ ಅಧಿಕವಪ್ಪುದು. `ಮಂತ್ರಲಿಂಗ ಶರೀರತಸ್ಯಾತ್ಸ ಉವ ಪರಮಃ ಶಿವಃ ಅಂತರಂಗಾರ್ಚನೆಯ ಮಾಡುವ ಶುದ್ಧ ಶೈವನು ಮಂತ್ರಸ್ಥರೂಪವಾದ ಶರೀರಿಯಹನು ಅಂತದರಿಂದಾತನು ಪರಮ ಶಿವನಪ್ಪನು ಎಂದು ಶಿವನು ಬೋಧಿಸುತ್ತಿರ್ದನು ಶಾಂತವೀರಪ್ರಭುವೇ.