Index   ವಚನ - 35    Search  
 
`ಶಿವಾವರಣ ದೇವಾಶ್ಚ ಸರ್ವಾನ್ ಸಂಪೂಜಯೇದ್ಗುಹ|| ಪೃಥಕ್‍ಸ್ಥಾನ ಸ್ಥಿತಾನ್ಸರ್ವಾನ್ ನಾರ್ಚಯೇದನ್ಯದೇವತಾಃ' -ಎಲೆ ಷಣ್ಮುಖನೆ, ಪದಾರ್ಥ ಪೂಜೆಯನುಮಾಡುವ ಶುದ್ಧಶೈವನು ಸಮಸ್ತರಾದ ಶಿವಾವರಣಸ್ಥರಾದ ಬ್ರಹ್ಮವಿಷ್ಣ್ವಾದಿ ದೇವತೆಗಳನು ಶಿವನ ಪರಿವಾರ ಭಾವನೆಯಿಂದ ಲೇಸಾಗಿ ಪೂಜಿಸುವುದು,ಶಿವಾವರಣಸ್ಥರಲ್ಲದೆಯಿದ್ಧ ಬ್ರಹ್ಮ ವಿಷ್ಣು ಸಪ್ತಮಾತೃಕೆಯರು ಮೊದಲಾದ ದೈವಂಗಳನು ಪೂಜಿಸಲಾಗದು ಎಂದು ಶಿವನು ನಿರೂಪಿಸು ತ್ತಿರ್ದನಯ್ಯ ಶಾಂತವೀರೇಶ್ವರಾ.