`ವೇದಾಂತ ಜನ್ಯಂ ಯಜ್ಞಾನಂ ವಿದ್ಯೇತಿ ಪರಿಕೀತ್ರ್ಯತೇ| ವಿದ್ಯಾಯಾಂ
ರಮೆತೇತಸ್ಯಾಂ ವೀರ ಇತ್ಯಭಿಧೀಯತೇ' ಇಂತೆಂದು ಉಪನಿಷತ್ತಿನಲ್ಲಿ ಹುಟ್ಟಿ ದಂಥ
ಯಾವುದಾನೊಂದು ಜ್ಞಾನ ಉಂಟು. ಅದೇ ವಿದ್ಯೆಯೆಂದು ಚೆನ್ನಾಗಿ
ಹೇಳಲ್ಪಡುತ್ತಿರ್ದಪುದು, ಆ ವಿದ್ಯೆಯಲ್ಲಿ ಯಾವಾತ ವಿನೋದಿಸುತ್ತಿರ್ದಪನು ಆತನೆ
ವೀರನೆಂದು ಚೆನ್ನಾಗಿ ಹೇಳಲ್ಪಡುತ್ತಿರ್ದಪನಯ್ಯಾ ಶಾಂತವೀರೇಶ್ವರಾ.