Index   ವಚನ - 60    Search  
 
`ಶಿವಕುಂಭಸ್ಥತೋಯೇನಾಪ್ಯಭಿಷಿಂ ಚ ಚೇತ್ತಿವಾಣು| ನಾದಬಿಂದುಕಲಾಂ ಜ್ಞಾತ್ವಾ ತತ್ತತ್‍ಸ್ಥಾನೇಷು ವಿನ್ಯಸೇತ್'| ಎಂದು ಶಿವಕುಂಭದಲ್ಲಿದ್ದ ತೀರ್ಥೋ ದಕದಿಂದ ಶ್ರೀಮತ್ಪಂಚಾಕ್ಷರಿಮಂತ್ರದಿಂದಭಿಷೇಕವನು ಮಾಡುವುದು. ನಾದ ವೆನಿಸಿರ್ಪ ಶಿವನ ಬಿಂದುವೆನಿಸಿರ್ಪ ಶಕ್ತಿಯಿಂ ಕಳೆಗಳೆನಿಸಿರ್ಪ ಶಿವಾವಯವಂ ಗಳಂ ಭಾವಾದಿಗಳಿಗೆ ತಂದುಕೊಂಡು ಪಿತೃಸ್ಥಾನಂಗಳಲ್ಲಿ ನ್ಯಾಸವ ಮಾಡುವದಯ್ಯಾ ಶಾಂತವೀರೇಶ್ವರಾ.