Index   ವಚನ - 63    Search  
 
`ದೇಹೇ ಪ್ರಾಣಂ ಸಮಾಯೋಜ್ಯ ಪ್ರಾಣಲಿಂಗೇ ಪ್ರಕಲ್ಪಯೇತ್| ಅವಿನಾಭಾವ ಸಂಯೋಗಾತ್ತಸ್ಮಾದೈಕ್ಯಂ ಪ್ರಕಲ್ಪಯೇತ್'| ಎಂದುದಾಗಿ, ಈ ಪ್ರಕಾರದಿಂ ವೀರಶೈವ ದೀಕ್ಷಿತನಾದ ವೀರಮಾಹೇಶ್ವರನು ದೇಹಪ್ರಾಣಂಗಳ ವರ್ತನೆ ಬೇರಾಗದ ಹಾಂಗೆ, ಏಕವಾಗಿ ಕೂಡಿ ತನ್ನ ಪ್ರಾಣಲಿಂಗದಲ್ಲಿ ಕಲ್ಪಿಸೂದ. ಆ ಅಗಲಿಕೆಯಿಂದ ಭಾವದ ಕೂಟದ ದೆಸೆಯಿಂದ ಪ್ರಾಣ ಲಿಂಗವೆಂಬೆರಡನೂ ಏಕವನು ಮಾಡುವುದಯ್ಯಾ ಶಾಂತವೀರೇಶ್ವರಾ.